ಕೆ.ಆರ್.ನಗರ: ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕೊರೊನಾ ಸೋಂಕಿತರಾಗಿ ಹೋಮ್ ಐಸೋಲೇಷನ್‌ನಲ್ಲಿ ಇರುವವರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೊಡ ಮಾಡಲಾಗುತ್ತಿರುವ ಐಸೋಲೇಷನ್ ಕಿಟ್‌ಗಳನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ತಾಲೂಕು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಅವರು ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ವಿವಿಧ ದಾನಿಗಳು ಸೇರಿ ಜಿಲ್ಲೆಯ 11 ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯ 75 ಸಾವಿರ ಕೊರೊನಾ ಸೋಂಕಿತರಿಗೆ 1 ಕೋಟಿ ವೆಚ್ಚದ ಕಿಟ್‌ಗಳನ್ನು ನೀಡಲಾಗುತ್ತಿದ್ದು ಕೆಪಿಸಿಸಿ ಆದೇಶ ಪಾಲಿಸಿರುವ ನಾವು ರಾಜ್ಯದಲ್ಲಿ ಮೊದಲ ಸ್ಥಾನದ ಸಾಧನೆ ಮಾಡಿದ್ದೇವೆ ಎಂದರು.
ಒಬ್ಬ ಸೋಂಕಿತ ವ್ಯಕ್ತಿ ಹತ್ತು ದಿನಗಳಿಗೆ ಪಡೆಯಬಹುದಾದ ಔಷಧಗಳು ಕಿಟ್‌ನಲ್ಲಿ ಇದ್ದು ಇವುಗಳನ್ನು ತಜ್ಞ ವೈದ್ಯರು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಧೃಡೀಕರಿಸಿದ ನಂತರ ವಿತರಣೆ ಮಾಡಲಾಗುತ್ತಿದ್ದು ಪ್ರತಿ ಕಿಟ್‌ನಲ್ಲಿ 685 ರೂಪಾಯಿ ಬೆಲೆಬಾಳುವ ಔಷಧಿಗಳಿದ್ದು, ಇದನ್ನು ತಾಲೂಕು ಕಾಂಗ್ರೇಸ್ ಮುಖಂಡ ಡಿ.ರವಿಶಂಕರ್ ನೇತೃತ್ವದಲ್ಲಿ ತಾಲೂಕಿನಲ್ಲಿ ವಿತರಣೆ ಮಾಡಲು ಆರೋಗ್ಯಾಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ಸರ್ಕಾರ ಮಾಡಲಾಗದ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದ್ದು ಇದು ನಮಗೆ ಹೆಮ್ಮೆಯ ವಿಚಾರವಾಗಿದ್ದು ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜು ಖರ್ಗೆಯವರ ಮಾರ್ಗದರ್ಶನದಲ್ಲಿ ಈ ಜನಪರವಾದ ಕೆಲಸ ಮಾಡುತ್ತಿದ್ದೇವೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಪ್ರಕಟಿಸಿದರು.
ಜಿ.ಪಂ.ಸದಸ್ಯ ಡಿ.ರವಿಶಂಕರ್ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸಹಕಾರದಿಂದ ನಾನು ವೈಯುಕ್ತಿವಾಗಿ ತಾಲೂಕಿನ ಜನತೆಯ ನೋವಿಗೆ ಸ್ಪಂದಿಸಿ ಅವರ ಅನುಕೂಲಕ್ಕಾಗಿ ಮೂರು ಅಂಬ್ಯುಲೆನ್ಸ್ ಉಚಿತವಾಗಿ ನೀಡುವುದರ ಜತೆಗೆ 2.5 ಲಕ್ಷ ರುಗಳ ವೆಚ್ಚದ ಔಷಧಿ ವಿತರಣೆ ಮಾಡಿದ್ದೇನೆ ಎಂದರು.
ಪುರಸಭೆ ಅಧ್ಯಕ್ಷ ಕೆ.ಜಿ.ಸುಬ್ರಹ್ಮಣ್ಯ, ಪುರಸಭಾ ಸದಸ್ಯರಾದ ಶಿವಕುಮಾರ್, ನಟರಾಜ್, ಶಂಕರ್, ಸಿದ್ದಿಕ್, ಶಂಕರ್, ಪ್ರಕಾಶ್, ಮೈಮುಲ್ ನಿರ್ದೇಶಕ ಜಗದೀಶ್‌ಬಸಪ್ಪ, ಕೆ.ಆರ್.ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಕುಮಾರ್, ನಗರಾಧ್ಯಕ್ಷ ಎಂ.ಜೆ.ರಮೇಶ್, ತಾಲೂಕು ಸಾಮಾಜಿಕ ಜಾಲ ತಾಣದ ಮುಖ್ಯಸ್ಥ ನವೀನ್‌ರಂಗಶೆಟ್ಟಿ, ತಾಲೂಕು ಕಾಂಗ್ರೆಸ್ ವಕ್ತಾರ ಸೈಯ್ಯದ್‌ಜಾಬೀರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ತಾ.ಪಂ. ಮಾಜಿ ಅಧ್ಯಕ್ಷರಾದ ಚಂದ್ರಶೇಖರ್, ಜಯರಾಮೇಗೌಡ, ಮಾಜಿ ಸದಸ್ಯ ಮಾಜಿ ಕೆ.ಪಿ.ಯೋಗೇಶ್, ನಗರ ಯೋಜನಾ ಪ್ರಾಧಿಕಾರದ ಮಾಜಿ ನಿರ್ದೇಶಕರಾದ ಕೆ.ಎಸ್.ಮಹೇಶ್, ಕೆ.ಎನ್.ಪ್ರಸನ್ನಕುಮಾರ್, ಟಿಎಪಿಸಿಎಂಸ್ ನಿರ್ದೇಶಕ ಹೆಚ್.ಹೆಚ್.ನಾಗೇಂದ್ರ, ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್, ಜಿಲ್ಲಾ ಕಾಂಗ್ರೆಸ್ ಮುಖಂಡ ಸಾಲಿಗ್ರಾಮ ಎಸ್.ಎಸ್.ಸಂದೇಶ್, ತಂದ್ರೆದಿಲೀಪ್, ಕೆ.ವಿನಯ್, ಪುಟ್ಟರಾಜು ಮತ್ತಿತರರು ಹಾಜರಿದ್ದರು.

By admin