ಸರಗೂರು: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಎಚ್.ಎ.ಬಿಂದು ‘ಕೃಷಿ ಅರ್ಥಶಾಸ್ತ್ರ’ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಪ್ರಶಸ್ತಿಯನ್ನು ಮೂಡಿಗೇರಿಸಿಕೊಂಡಿದ್ದಾರೆ.
ತಾಲೂಕಿನ ನೆರಳೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಎ.ಎಸ್.ತಾರಾ ಅವರ ಪುತ್ರಿ ಬಿಂದು ಅವರಿಗೆ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಮೂವತ್ಮೂರನೆಯ ಘಟಿಕೋತ್ಸವದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ನಿರಂತರ ಓದಿನಿಂದ ಯಶಸ್ಸುಗಳಿಸಲು ಸಾಧ್ಯ. ನಿತ್ಯ 12 ತಾಸು ಓದುತ್ತಿದ್ದ ನನಗೆ ಜೀವನದಲ್ಲಿ ಸಾಧಸಿಬೇಕು ಎಂಬ ಛಲ. ಜತೆಗೆ ತಂದೆ-ತಾಯಂದಿರ ಆಸೆಗಳನ್ನು ಈಡೇರಿಸಬೇಕು ಎಂಬ ಹಂಬಲ. ಹೀಗಾಗಿ ಓದಿನಲ್ಲಿ ಸಾಧನೆಗೈಯಲು ಸಾಧ್ಯವಾಯಿತು. ಇದಕ್ಕೆ ಸಹಕಾರಿಯಾದ ಪೋಷಕರು, ಶಿಕ್ಷಕರಿಗೆ ಮೊದಲ ಕೃತಜ್ಞತೆ. ಇದರೊಂದಿಗೆ ಗ್ರಂಥಾಲುದಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಗುರಿ ಸಾಧಿಸಬೇಕಿದೆ ಎಂದು ಹರ್ಷವ್ಯಕ್ತಪಡಿಸಿದ್ದಾರೆ.