ಚಾಮರಾಜನಗರ: ಮುಂಬರುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-೨೦೨೩ರ ಸಂಬಂಧ ವಿವಿಧ ಮತಗಟ್ಟೆ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಪೂವಿತಾ ಅವರು ಭೇಟಿ ನೀಡಿ ಪರಿಶೀಲಿಸಿದರು.
ಚಾಮರಾಜನಗರ ಪಟ್ಟಣ ವ್ಯಾಪ್ತಿಯ ಪಿಡ್ಲ್ಯೂಡಿ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಕೇಂದ್ರ, ರಾಮಸಮುದ್ರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ-೨ ಮತಗಟ್ಟೆ ಕೇಂದ್ರ ಹಾಗೂ ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಂತ ಜೋಸೆಫರ ನರ್ಸರಿ ಶಾಲೆಯ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ವೀಕ್ಷಿಸಿದರು.
ಇದೇ ವೇಳೆ ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿ (ಬಿ.ಎಲ್.ಒ)ಗಳೊಂದಿಗೆ ವಿವರ ಪಡೆದರು.
ಚಾಮರಾಜನಗರ ತಾಲೂಕಿನ ಕೂಡ್ಲೂರು ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಚುನಾವಣಾ ಸಂಧರ್ಭದಲ್ಲಿ ಇವಿಎಂ ಮತ್ತು ವಿವಿಪಿಎಟಿ ಗಳ ಕಾರ್ಯವೈಖರಿ ಮತ್ತು ಉಪಯೋಗಿಸುವಿಕೆ ಕುರಿತಂತೆ ಸಾರ್ವಜನಿಕರು, ಮತದಾರರಲ್ಲಿ ಅರಿವು ಮೂಡಿಸಿದರು. ತಹಶೀಲ್ದಾರ್ ಬಸವರಾಜು, ಗ್ರಾಮ ಲೆಕ್ಕಿಗರು, ಇತರರು ಹಾಜರಿದ್ದರು.
