ಚಾಮರಾಜನಗರ: ಕುವೆಂಪು ಅವರ ರಚನೆಯ ಮಹಾಕಾವ್ಯಗಳ ಅಧ್ಯಯನಕ್ಕೆ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬ ಕನ್ನಡಿಗರು ಮುಂದಾಗಬೇಕಿದೆ ಎಂದು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಹೇಳಿದರು.
ನಗರದ ಡಾ.ರಾಜ್ ಕುಮಾರ್ ಜಿಲ್ಲಾರಂಗಮಂದಿರದಲ್ಲಿ ಅಖಿಲ ಕರ್ನಾಟಕ ಕನ್ನಡಮಹಾಸಭೆ ರಾಜ್ಯಘಟಕದ ವತಿಯಿಂದ ಕರ್ನಾಟಕ ಏಕೀಕರಣ ಮಹೋತ್ಸವ ಹಾಗೂ ಕುವೆಂಪು ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಏಕೀಕರಣ ಚಳವಳಿ ಆರಂಭಕ್ಕೂ ಮುನ್ನ ಈಗಿನ ಕರ್ನಾಟಕದ ಹಲಪ್ರಾಂತ್ಯಗಳು ಮುಂಬೈ, ಮದ್ರಾಸ್, ಹೈದರಾಬಾದ್ ವರಗೆ ಹಂಚಿಹೋಗಿದ್ದವು. ಆಸಂದರ್ಭದಲ್ಲಿ ಕನ್ನಡನೆಲದ ಮಹಾನ್ ನಾಯಕರು ಹಗಲಿರುಳು ಚವಳಿ ನಡೆಸಿ ಹರಿದುಹಂಚಿಹೋಗಿದ್ದ ಪ್ರಾಂತ್ಯಗಳನ್ನು ಒಟ್ಟುಗೂಡಿಸಿ, ಅಖಂಡಕರ್ನಾಟಕವನ್ನಾಗಿಸಿದರು.
ಅಂತಹ ವಾತಾವರಣ ಕನ್ನಡಪರಸಂಘಟನೆಗಳು ಆಚರಣೆ ಮಾಡುವ ಕನ್ನಡಪರ ಕಾರ್ಯಕ್ರಮಗಳಲ್ಲಿ ಕಾಣಬಹುದಾಗಿದೆ ಎಂದರು.
ಜಿಲ್ಲೆಯ ಗಡಿಭಾಗದಲ್ಲಿ ೧೭ ಗ್ರಾಮಪಂಚಾಯಿತಿಗಳಿದ್ದು, ಅವುಗಳಿಗೆ ಮೂಲಸೌಕರ್ಯ ಕಲ್ಪಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ ಎಂದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪನಿರ್ದೇಶಕ ಕೆ.ಎ.ರಾಜೇಂದ್ರಪ್ರಸಾದ್ ಮಾತನಾಡಿ, ಕನ್ನಡಭಾಷೆಗೆ ೨೫೦೦ ವರ್ಷಗಳ ಇತಿಹಾಸ ಹೊಂದಿದ್ದು, ಕಾವೇರಿಯಿಂದಮಾಗೋದಾವರಿಗೆ ಕನ್ನಡನಾಡು ವಿಸ್ತಾರಗೊಂಡಿತ್ತು ಎಂದು ಅಂದಿನ ಕಾಲದಲ್ಲೇ ಕವಿರಾಜಮಾರ್ಗಕಾರ ಉಲ್ಲೇಖ ಮಾಡಿದ್ದಾನೆ. ದುರಂತ ಎಂದರೆ ಈಚಿನ ದಿನಗಳಲ್ಲಿ ರಾಜ್ಯದ ಗಡಿಭಾಗದಲ್ಲಿ ಕನ್ನಡಶಾಲೆಗಳನ್ನು ಮುಚ್ಚುವ ಸ್ಥಿತಿ ಎದುರಾಗಿದೆ.
ಕನ್ನಡಪರಸಂಘಟನೆಗಳು ಕನ್ನಡಶಾಲೆಗಳನ್ನು ಮುಚ್ಚಲು ಅವಕಾಶ ಕೊಡಬಾರದು, ಗಡಿಭಾಗದಲ್ಲಿರುವ ಕನ್ನಡದ ಅಸ್ಮಿತೆ ಹಾಳಾಗದಂತೆ ಎಚ್ಚರವಹಿಸಬೇಕು ಎಂದರು.
ಅಖಿಲ ಕರ್ನಾಟಕ ಕನ್ನಡಮಹಾಸಭೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ತಮ್ಮ ಸಂಸ್ಥೆಯಿಂದ ರಾಷ್ಟ್ರ, ರಾಜ್ಯದಹಿತಕ್ಕಾಗಿ ದುಡಿದ ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ರಾಜ್ಯದಯಾವುದೇ ಮೂಲೆಯಲ್ಲಿ ಕನ್ನಡನೆಲಜಲಭಾಷೆಗೆ
ಧಕ್ಕೆಯಾದರೆ ಮೊದಲ ಹೋರಾಟಶುರುವಾಗುವುದು ಚಾಮರಾಜನಗರದಲ್ಲಿ ಎಂಬುದೇ ಕನ್ನಡಿಗರ ಹೆಗ್ಗಳಿಕೆ ಎಂದರು.
ಸನ್ಮಾನ ಸ್ವೀಕರಿಸಿದ ಬಿಜೆಪಿ ರೈತಮುಖಂಡ ಅಮ್ಮನಪುರಮಲ್ಲೇಶ್ ಮಾತನಾಡಿ, ನಾವು ನಮ್ಮ ಭಾಷೆಯನ್ನು ಇತರೇ ಭಾಷಿಗರಿಗೂ ಕಲಿಸಬೇಕು.
ಭಾಷೆಯ ಮೇಲೆ ಅಭಿಮಾನ ಪ್ರತಿಯೊಬ್ಬರಿಗೂ ಇರಬೇಕು, ಹಾಗಾದಾಗ ಕರ್ನಾಟಕದ ಘನತೆ ಹೆಚ್ಚುತ್ತದೆ ಎಂದರು.
ಇದೇವೇಳೆ ನಾನಾಕ್ಷೇತ್ರಗಳಲ್ಲಿ ಸೇವೆಸಲ್ಲಿಸುತ್ತಿರುವ ಗಣ್ಯರನ್ನು ಸನ್ಮಾನಿಸಲಾಯಿತು.
ಮೈಸೂರುವಿದ್ಯಾವಿಕಾಸ ಶಿಕ್ಷಣಸಂಸ್ಥೆ ಕಾರ್ಯದರ್ಶಿ ವಿ.ಕವೀಶ್ ಗೌಡ, ಒಕ್ಕಲಿಗರಸಂಘದ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರಗೌಡ, ಒಕ್ಕಲಿಗರಸಂಘದ ಮೈಸೂರು-ಚಾಮರಾಜನಗರ ಜಿಲ್ಲಾ ಗೌರವಾಧ್ಯಕ್ಷ ಆಲತ್ತೂರುಜಯರಾಂ,
ಜಿಲ್ಲಾಪದವಿ ಪೂರ್ವ ಶಿಕ್ಷಣ ಇಲಾಖೆ ಜಂಟಿನಿರ್ದೇಶಕ ಸಿ.ಮಂಜುನಾಥ ಪ್ರಸನ್ನ, ಗುಂಡ್ಲುಪೇಟೆ ತಹಸೀಲ್ದಾರ್ ಸಿ.ಜಿ.ರವಿಶಂಕರ್,
ಅಖಿಲ ಕರ್ನಾಟಕ ಕನ್ನಡಮಹಾಸಭೆ ಗೌರವಾಧ್ಯಕ್ಷ ಶಾ.ಮುರಳಿ, ನಿಜಧ್ವನಿಗೋವಿಂದರಾಜು, ಜಿಲ್ಲಾಧ್ಯಕ್ಷ ಸಾಗರ್ ರಾವತ್, ಪ್ರದಾನ ಕಾರ್ಯದರ್ಶಿ ಚಾ.ವೆಂ.ರಾಜಗೋಪಾಲ್, ಸಹಕಾರ್ಯದರ್ಶಿ ಪಣ್ಯದಹುಂಡಿರಾಜು, ತಾಲೂಕು ಅಧ್ಯಕ್ಷ ಸಿದ್ದರಾಜು,
ಸಂಘಟನಾಕಾರ್ಯದರ್ಶಿ ಅರುಣ್‌ಕುಮಾರ್ ಗೌಡ,
ಗಡಿನಾಡ ಕನ್ನಡ ರಕ್ಷಣಾವೇದಿಕೆ ಅಧ್ಯಕ್ಷ ಚಾ.ರಾ.ಕುಮಾರ್, ಶ್ರೀಗಂಧ ಕನ್ನಡಯುವವೇದಿಕೆ ಅಧ್ಯಕ್ಷ ರವಿಚಂದ್ರಪ್ರಸಾದ್, ಎಸ್‌ಪಿಬಿ ಗಾನಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ಅಧ್ಯಕ್ಷ ಶಿವಣ್ಣ, ಸನ್ಮಾನಿತರು, ವಿವಿಧ ಕನ್ನಡಪರಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.