ಚಾಮರಾಜನಗರ : ಪ್ರತಿ ಕುಟುಂಬದಲ್ಲೂ ಅಜ್ಜಿ ಮತ್ತು ಮುತ್ತಜ್ಜಿಯ ಸೇವೆ ಮತ್ತು ತ್ಯಾಗವನ್ನು ಎಂದೂ ಮರೆಯಲಾಗದು. ನಿಸ್ವಾರ್ಥತೆಯಿಂದ ಪ್ರೀತಿ ತುಂಬಿದ ಸಂಸ್ಕೃತಿಯನ್ನು ಕಟ್ಟಿಕೊಡುವಲ್ಲಿ ಅಜ್ಜಿ ಮುತ್ತಜ್ಜಿಯರು ಸದಾ ಕಾಲ ಸ್ಮರಣೀಯರು. ಎಂದು ಪೊಲೀಸ್ ಅಧೀಕ್ಷಕರು ಆದ ಶ್ರೀಮತಿ ಪ್ರಿಯದರ್ಶಿನಿ ಸಾಣೆಕೊಪ್ಪ ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ ಋಗ್ವೇದಿ ಯೂತ್ ಕ್ಲಬ್ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಜಾನ್ಸಿ ರಾಣಿ ಲಕ್ಷ್ಮೀಬಾಯಿ ಜನ್ಮದಿನ ಹಾಗೂ ಅಜ್ಜಿ ಮುತ್ತಜ್ಜಿ ನೆನಪು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿರುವ ಋಗ್ವೇದಿ ಯೂತ್ ಕ್ಲಬ್ ವಿಶೇಷವಾಗಿ ಜಾಗೃತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಭಾರತದ ಶ್ರೇಷ್ಠ, ಆದರ್ಶ ಹಾಗೂ ಸದೃಢ ವೀರವನಿತೆಯಾಗಿದ್ದವರು. ಬ್ರಿಟಿಷರ ವಿರುದ್ಧ ಸಮರ್ಥವಾಗಿ ಭಾರತದ ಸ್ವಾಭಿಮಾನವನ್ನು, ಸ್ವಾತಂತ್ರ್ಯದ ಕಿಚ್ಚನ್ನು ವ್ಯಕ್ತಪಡಿಸಿದ ರಾಷ್ಟ್ರ ವೀರ ವನಿತೆ ಎಂದರು.
ಮಹಿಳಾ ಸಂಘಟನೆಯಲ್ಲಿ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ವತ್ಸಲ ರಾಜಗೋಪಾಲ್ ರವರನ್ನು ಸಂಘಟನಾ ರತ್ನ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಮೈಸೂರಿನ ನಿವೃತ್ತ ಮುಖ್ಯ ಶಿಕ್ಷಕರಾದ ಕೆವಿ ಶ್ರೀಮತಿ ಉದ್ಘಾಟಿಸಿ ಮಾತನಾಡುತ್ತಾ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸಮಾಜಕ್ಕೆ ಸೇವೆಯನ್ನು ಕೊಡುವ ಮನಸ್ಥಿತಿಯನ್ನು ನಿರ್ಮಿಸುವುದು ನಮ್ಮ ಪೂರ್ವಜರು. ನಮ್ಮ ಪೂರ್ವಿಕರಲ್ಲಿ ಅಜ್ಜಿ ಮತ್ತು ಮುತ್ತಜ್ಜಿ ಹಲವು ಕನಸುಗಳನ್ನು ಮಕ್ಕಳಲ್ಲಿ ಮೂಡಿಸಿ ಕುಟುಂಬವನ್ನು ಕಟ್ಟುವ ಮತ್ತು ಸಂಸ್ಕೃತಿ ಮೌಲ್ಯಗಳನ್ನು ಮನಸ್ಥಿತಿಯನ್ನು ನಿರ್ಮಿಸುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಋಗ್ವೇದಿ ಯೂತ್ ಕ್ಲಬ್ ಗೌರವ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಮಾತನಾಡಿ ಅಜ್ಜಿ ಮುತ್ತಜ್ಜಿ ನೆನಪು ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲೂ ಪರಿಣಾಮಕಾರಿಯಾದ ಪ್ರಭಾವವನ್ನು ಬೀರುತ್ತದೆ . ತಾಯಿಯ ಪ್ರೀತಿ, ಮುತ್ತಜ್ಜಿಯ ಕನಸಿನ ನೆನಪು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸದಾ ಉಳಿಯುವ ಹಾಗೂ ಪ್ರತಿನಿತ್ಯ ನೆನೆಸಿಕೊಳ್ಳುವ ಶ್ರೇಷ್ಠ ಜೀವಿಗಳು. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಅಪಾರ ಗೌರವವಿದ್ದು ಮಹಿಳಾ ಶಕ್ತಿ ಪ್ರೀತಿ ಮತ್ತು ಚೈತನ್ಯ ಪ್ರತಿಯೊಬ್ಬರಲ್ಲಿಯೂ ಹೊಸ ಕಾರ್ಯಗಳಿಗೆ ಸ್ಪೂರ್ತಿಯನ್ನು ತುಂಬುತ್ತದೆ. ಅಜ್ಜಿಯ ಪ್ರೀತಿಯನ್ನು ಮುತ್ತಜ್ಜಿಯ ಕನಸನ್ನು ಕಟ್ಟಿಕೊಡುವ ಮೂಲಕ ಯುವ ಪೀಳಿಗೆ ಸದೃಢ ಸಮಾಜವನ್ನು ನಿರ್ಮಿಸಿ ನಮ್ಮ ಸಂಸ್ಕೃತಿ ಪರಂಪರೆಯನ್ನು ಸದಾ ಕಾಲ ಸ್ಮರಿಸುವ ಕಾರ್ಯವನ್ನು ಮಾಡುವುದು ಶ್ರೇಯಸ್ಕರ ಎಂದು ತಿಳಿಸಿದರು.
ಬ್ರಾಹ್ಮಿ ಮಹಿಳಾ ಸಂಘದ ಮಾಜಿ ಅಧ್ಯಕ್ಷರಾದ ಲೀಲಾ ಪ್ರಭು ಕುಮಾರ್, ವಿಜಯಲಕ್ಷ್ಮಿ, ಹಿರಿಯ ನಾಗರೀಕರಾದ ಸರೋಜಮ್ಮ, ಶಿಕ್ಷಕರಾದ ಅನಿತಾ ,ಕುಸುಮ ನಂದಿನಿ, ವಿಜಯಲಕ್ಷ್ಮಿ, ಆಶಾ ನರಹರಿ ರಾವ್, ನಾಗಸುಂದರ್, ರಾಜಗೋಪಾಲ್ ವಿಜಯ್ ಕುಮಾರ್, ಗುಂಡ್ಲುಪೇಟೆ ರಮೇಶ್, ಪಾರ್ವತಿ, ಸುಪ್ರಿಯಾ, ಸರಸ್ವತಿ, ನಾಗರತ್ನ ,ಮಾಲಾ, ಸಾನಿಕ, ಶ್ರಾವ್ಯ ಋಗ್ವೇದಿ ಉಪಸ್ಥಿತರಿದ್ದರು.