ಮೈಸೂರು: ರಾಷ್ಟ್ರ ನಾಯಕ ರಾಹುಲ್ ಗಾಂಧಿ ರವರ 51ನೇ ವರ್ಷದ ಹುಟ್ಟುಹಬ್ಬದ  ಅಂಗವಾಗಿ ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಜೂ.18ರಂದು ಬೆಳಗ್ಗೆ 11-30ಕ್ಕೆ ರೈಲ್ವೆ ಸ್ಟೇಷನ್ ಹತ್ತಿರ ಇರುವ ಇಂದಿರಾ ಗಾಂಧಿ ಭವನ ಕಾಂಗ್ರೆಸ್ ಕಚೇರಿಯಲ್ಲಿ ವಿವಿಧ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವವರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಇದೇ ವೇಳೆ  ಕೊರೊನಾ ವಾರಿಯರ್ಸ್ ಗಳಾದ ಶವಸಂಸ್ಕಾರ ನೆರವೇರಿಸುವ ವರಿಗೆ, ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು ಮತ್ತು ಅಂಬುಲೆನ್ಸ್ ಚಾಲಕರು ಮತ್ತು ಸಹಾಯಕರಿಗೆ 2 ಲಕ್ಷ ಮೌಲ್ಯದ “ಕೊರೊನಾ ಕವಚ” ಇನ್ಶೂರೆನ್ಸ್ ಮತ್ತು ದೃಶ್ಯ ಮಾಧ್ಯಮ ಹಾಗೂ ಫೋಟೋಗ್ರಾಫರ್ಸ್ ಗೆ ದಿನಸಿ ಕಿಟ್  ವಿತರಣೆ ಮಾಡಲಾಗುತ್ತಿದೆ. ಮೊದಲನೇ ಹಂತವಾಗಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರ ನೆರವೇರಿಸುವವರಿಗೆ ಮತ್ತು  ಅಂಬುಲೆನ್ಸ್ ಚಾಲಕರಿಗೆ ವಿಮೆ ವಿತರಣೆ  ಮಾಡಲಾಗುತ್ತಿದೆ.

ಶವಸಂಸ್ಕರಾರ ಮಾಡುವ ಶ್ರೀನಿವಾಸ್* (ಜೋಡಿ ತೆಂಗಿನ ಮರ ಮುಕ್ತಿಧಾಮ), ಪ್ರಕಾಶ್ ( ಜಯನಗರ ಮುಕ್ತಿದಾಮ), ಮಾದೇವ (ವಿಜಯನಗರ ಮುಕ್ತಿಧಾಮ), ಪ್ರದೀಪ್ ಅಂಬುಲೆನ್ಸ್ ಚಾಲಕರು, ರಾಜಶೇಖರ್ (ವಿಜಯನಗರಮುಕ್ತಿದಾಮ), ಸೋಮಶೇಖರ್ (ಜಯನಗರ ಮುಕ್ತಿಧಾಮ), ಅಭಿಷೇಕ್ (ವಿಜಯನಗರ ಮುಕ್ತಿಧಾಮ) ಅವರಿಗೆ ದಿನಸಿಕಿಟ್ ವಿತರಿಸಲಾಗುತ್ತಿದೆ

ಪ್ರಚಾರ ಸಮಿತಿ ಅಧ್ಯಕ್ಷರಾದ ಡಾ. ಎಂ. ಕೆ. ಅಶೋಕ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ  ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವ ನಾರಾಯಣ್,  ಶಾಸಕರಾದ ತನ್ವಿರ್ ಸೆಟ್, ಯತೀಂದ್ರ ಸಿದ್ದರಾಮಯ್ಯ ಮತ್ತು ಡಿಸಿಸಿ ಅಧ್ಯಕ್ಷರಾದ ಆರ್. ಮೂರ್ತಿ, ಡಾ ಬಿ.ಜೆ ವಿಜಯಕುಮಾರ್, ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್, ವಾಸು, ಉಸ್ತುವಾರಿ ಮಹಾಪೌರ ಅಲ್ತಾಫ್, ಚಾಮರಾಜ ಕ್ಷೇತ್ರದ ಮುಖಂಡರಾದ ಕೆ.ಹರೀಶ್ ಗೌಡ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಪ್ರಚಾರ ಸಮಿತಿಯ ಸಂಚಾಲಕ  ಪಿ.ಕುಮಾರ್ ಗೌಡ ತಿಳಿಸಿದ್ದಾರೆ.

By admin