ಸರಗೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ಸಿನ ಹಿರಿಯ ಮುಖಂಡ ಕಂಚಮ್ಮಳ್ಳಿ ಗ್ರಾಮದ ನಿವಾಸಿ ದೊಳ್ಳೇಗೌಡ(59) ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಮೃತರಾಗಿದ್ದಾರೆ.
ಮೃತರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಜಿಲ್ಲಾ ಕಾಂಗ್ರೆಸ್ನ ಪ್ರಧಾನ ಕಾರ್ಯದಶರ್ಿಯಾದ ರವಿ.ಡಿ.ದೊಳ್ಳೇಗೌಡ ಅವರ ತಂದೆಯಾದ ಇವರು ಮಹದೇವನಗರದಲ್ಲಿರುವ ಶ್ರೀಶನೈಶ್ಚರ ದೇವಸ್ಥಾನದ ಸಂಸ್ಥಾಪಕರಾದ ಕುಮಾರಸ್ವಾಮಿ ಅವರ ಭಾವ ಕೂಡ ಆಗಿದ್ದಾರೆ. ಮೃತರ ಅಂತ್ಯೆಕ್ರಿಯೆ ಸ್ವಗ್ರಾಮದಲ್ಲಿರುವ ಸಮಾಜದ ರುದ್ರಭೂಮಿಯಲ್ಲಿ ಸೋಮವಾರ ನೆರವೇರಿತು.
ಸಂತಾಪ: ಎಚ್.ಡಿ.ಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಜಾಜ್ ಪಾಷಾ, ಕಂಚಮ್ಮಳ್ಳಿ ಗ್ರಾ.ಪಂ.ಮಾಜಿ ಸದಸ್ಯ ಶ್ರೀನಿವಾಸ್, ಕುಮಾರಸ್ವಾಮಿ, ರವಿ, ರಂಗರಾಜು ಸೇರಿದಂತೆ ಅಪಾರ ಬಂಧುಬಳಗ ಸಂತಾಪ ಸೂಚಿಸಿದ್ದಾರೆ.