ಸರಗೂರು: ಕಳಸೂರು ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಅತೀ ಶೀಘ್ರದಲ್ಲೇ ಶಾಶ್ವತ ಪರಿಹಾರ ನೀಡಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾಧು ತಿಳಿಸಿದರು.

ತಾಲೂಕಿನ ಕಳಸೂರು ಗ್ರಾಮದಲ್ಲಿ ಪಿಎಂಜಿಎಸ್ವೈ ಯೋಜನೆಯಡಿ 3.70 ಕೋಟಿ ರೂ.ವೆಚ್ಚ ನಿಮರ್ಾಣದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿ, ಸಮೀಪದಲ್ಲೇ ಕಬಿನಿ ಜಲಾಶಯವಿದ್ದರೂ ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿ ಶೀಘ್ರದಲ್ಲೇ ನೀರಿನ ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಗ್ರಾಮಕ್ಕೆ ಹಲವಾರು ಸಾರಿ ಭೇಟಿ ನೀಡಿದ್ದು, ಗ್ರಾಮಾಭಿವೃದ್ಧಿಗೆ ಸಾಕಷ್ಟು ಅನುದಾನವನ್ನೂ ನೀಡಿದ್ದೇನೆ. ಮುಂದಿನ ದಿನಗಳಲ್ಲಿಯೂ ನೀಡುತ್ತೇನೆ. ಇದರೊಂದಿಗೆ ತೋಗಟವೀರ ಸಮಾಜದ ಬೀದಿಗೆ ಕಾಂಕ್ರೀಟ್ ರಸ್ತೆ ನಿಮರ್ಾಣಕ್ಕೆ ಮುಂದಾಗುತ್ತೇನೆ. ಹಿಂದೆ ಬೀದರಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಟ್ಟಿದ್ದ ಕಳಸೂರು ಎನ್.ಬೇಗೂರಿಗೆ ಸೇರಿದೆ. ಅಧಿಕಾರಿಗಳೊಂದಿಗೆ ಚಚರ್ಿಸಿ ಕಳಸೂರಿನ ಮೂಲಸಮಸ್ಯೆಗಳ ನಿವಾರಣೆಗೆ ಮುಂದಾಗುತ್ತೇನೆ ಎಂದು ಅವರು ಹೇಳಿದರು.

ಕುರುಬ ಸಮಾಜದ ತಾಲೂಕು ಅಧ್ಯಕ್ಷ ಶಿವಪ್ಪ ಕೋಟೆ ಮಾತನಾಡಿ, ಕಳಸೂರಿನ ಮೂಲ ಸೌಲಭ್ಯಗಳ ಕೊರತೆ ಬಗ್ಗೆ ಶಾಸಕರ ಗಮನಕ್ಕೆ ತಂದರು. ಜಿ.ಪಂ.ಮಾಜಿ ಸದಸ್ಯ ಚಿಕ್ಕವೀರನಾಯಕ ಮಾತನಾಡಿದರು. ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ನಯಾಜ್, ಶಿವರಾಜು, ಮುಖಂಡರಾದ ಬಸವರಾಜು, ಬೀರೇಗೌಡ, ಗಣೇಶ್, ದೊಡ್ಡೇಗೌಡ, ಗ್ರಾ.ಪಂ.ಸದಸ್ಯ ಸುರೇಶ್, ಜಯರಾಂ, ಕಾಳಸ್ವಾಮಿ, ಮಂಜುನಾಥ್, ಕುಮಾರ್, ಸುರೇಶ್, ಪಿಡಿಒ ರುಕ್ಮಾಂಗದ, ಶ್ರೀನಿವಾಸ್, ರಘು, ಕೆಂಡಗಣ್ಣಸ್ವಾಮಿ, ಗೋಪಾಲಯ್ಯ, ಪುಟ್ಟಶೆಟ್ಟಿ ಸೇರಿದಂತೆ ಇನ್ನಿತರರು ಹಾಜರಿದ್ದರು.

By admin