ಚಾಮರಾಜನಗರ: ಕನ್ನಡ ಸಂಘಟನೆಯನ್ನು ಬೆಳೆಯಲು ಪ್ರೋತ್ಸಾಹಿಸಿ ,ನಾಡು ,ನುಡಿ, ಜಲ, ಭಾಷೆ ಕನ್ನಡ ,ಕನ್ನಡಿಗ, ಕರ್ನಾಟಕದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಎಸ್ ಋಗ್ವೇದಿ ತಿಳಿಸಿದರು.

ಅವರು ಜೈ ಹಿಂದ್ ಪ್ರತಿಷ್ಠಾನದ ಜೈ ಹಿಂದ್ ಕಟ್ಟೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿ ಕನ್ನಡದ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗಿರಬೇಕು. ಕನ್ನಡದ ಸಂಸ್ಕೃತಿ ,ಪರಂಪರೆ ಸಾಹಿತ್ಯ ,ಕ್ರೀಡೆ ,ನೆಲ ,ಜಲದ ಸಂರಕ್ಷಣೆಗಾಗಿ ಹೋರಾಟ ನಡೆಸುವ ಕನ್ನಡ ಹೋರಾಟಗಾರರು, ಸಾಹಿತಿಗಳು ,ಕಲಾವಿದರು ಮತ್ತು ಹೆಮ್ಮೆಯ ಕನ್ನಡಿಗರನ್ನು ಗೌರವಿಸಿ ಕನ್ನಡತನವನ್ನು ಹೆಚ್ಚಿಸಬೇಕು  ಕನ್ನಡದ ಸಂಶೋಧನೆ ಕನ್ನಡೇತರರಿಗೆ ಕನ್ನಡ ಕಲಿಸುವುದು ,ಕನ್ನಡಿಗರ ಹೆಸರು ಶಾಶ್ವತವಾಗಿ ಉಳಿಸುವಂತಹ ಕಾರ್ಯ ಮಾಡುವ ಮೂಲಕ ಕನ್ನಡಕ್ಕಾಗಿ ದುಡಿಯುತ್ತೇನೆ ಎಂಬ ಸಂಕಲ್ಪವನ್ನು ಯುವಕರು ಮತ್ತು ವಿದ್ಯಾರ್ಥಿಗಳು ತೊಡಬೇಕು ಕನ್ನಡದಲ್ಲಿ ಸಹಿ ಮಾಡುವ ಮಾನಸಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ, ಚಿಂತಕ ಸುರೇಶ್ ಎನ್ ಋಗ್ವೇದಿ ಮಾತನಾಡಿ

ಕನ್ನಡ ಪತ್ರಿಕೆಗಳನ್ನು, ಕಥೆ,ಚಿತ್ರಕಥೆ ,ಪುಸ್ತಕಗಳನ್ನು ಆಕಾಶವಾಣಿ, ದೂರದರ್ಶನದ ಕನ್ನಡ ಕಾರ್ಯಕ್ರಮಗಳನ್ನು ನೋಡುವ ಕೇಳುವ ಮತ್ತು ಪತ್ರ ವ್ಯವಹಾರಗಳನ್ನು ಕನ್ನಡದಲ್ಲಿ ಬಳಸುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಎಲ್ಲರಿಂದಲೂ ಆಗಬೇಕಿದೆ. ಕನ್ನಡವನ್ನು ನಾವು ಉಳಿಸಿದರೆ ಕನ್ನಡವು ನಮ್ಮನ್ನು ಉಳಿಸುತ್ತದೆ. ಕನ್ನಡದ ಶ್ರೀಮಂತ ಸಂಸ್ಕೃತಿ ಪರಂಪರೆ ಸಾಹಿತ್ಯವನ್ನು ಓದುವ ಅಭ್ಯಾಸ  ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಗೀತೆಗಳ ಗಾಯನ ಜರುಗಿತು. ಋಗ್ವೇದಿ ಯೂತ್ ಕ್ಲಬ್ ವರ್ಷಿಣಿ, ಸುಪ್ರಿಯಾ, ಸಾನಿಕಾ, ಶ್ರಾವ್ಯ ಋಗ್ವೇದಿ,  ಉಪಸ್ಥಿತ ರಿದ್ದರು.