ಚಾಮರಾಜನಗರ: ಕನ್ನಡಭಾಷೆಗೆ ಎರಡೂವರೆ ವರ್ಷಗಳ ಇತಿಹಾಸವಿದ್ದು, ಅದನ್ನು ಉಳಿಸಿ. ಬೆಳೆಸುವ ಮಹತ್ವದ ಹೊಣೆಗಾರಿಕೆ ಕನ್ನಡಿಗರ ಮೇಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಮಂಜುನಾಥಪ್ರಸನ್ನ ಹೇಳಿದರು.
ತಾಲೂಕಿನ ಮಂಗಲ ಗ್ರಾಮದ ಸರಕಾರಿ ಪ್ರೌಡಶಾಲಾವರಣದಲ್ಲಿ ಚೇತನಲಾವಾಹಿನಿ ಸಂಸ್ಥೆ ವತಿಯಿಂದ ಶನಿವಾರ ೬೭ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಕನ್ನಡ ನಿತ್ಯೋತ್ಸವ ಕಾರ್ಯಕ್ರಮವನ್ನು ಭುವನೇಶ್ವರಿಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಕನ್ನಡಭಾಷೆ ಇಂದು ಉಳಿದಿದೆ ಎಂದರೆ ಅದು ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ. ಇಂಗ್ಲಿಷ್, ಹಿಂದಿ ಸೇರಿದಂತೆ ಇತರೇ ಭಾಷೆಗಳ ಪ್ರಭಾವದಿಂದ ನಗರಪ್ರದೇಶದಲ್ಲಿ ಕನ್ನಡಭಾಷೆ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಹಿಂದಿ, ಇಂಗ್ಲಿಷ್ ಭಾಷಾಕಲಿಕೆ ಇಂದು ಅನಿವಾರ್ಯ, ಕನ್ನಡಮಾತೃಭಾಷೆಯಾಗಿದ್ದು, ಅದನ್ನು ಉಳಿಸಿಬೆಳೆಸುವುದು ಕನ್ನಡಿಗರ ಆದ್ಯ ಕರ್ತವ್ಯವಾಗಿದೆ. ಕನ್ನಡಭಾಷೆಗೆ ೮ ಜ್ಞಾನಪೀಠಪ್ರಶಸ್ತಿ ಸಂದಿರುವುದು ಕನ್ನಡಿಗರಿಗೆ ಗೌರವ ತರುವ ವಿಚಾರವಾಗಿದೆ. ವಿದ್ಯಾರ್ಥಿಗಳು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿಗಳ ಅಧ್ಯಯನಕ್ಕೆ ಮುಂದಾಗಬೇಕು ಎಂದರು.
ಚೇತನಕಲಾವಾಹಿನಿ ಸಂಸ್ಥೆ ಅಧ್ಯಕ್ಷ ರಾಜಪ್ಪ ಮಾತನಾಡಿ, ಚೇತನಕಲಾವಾಹಿನಿ ಸಂಸ್ಥೆ ಆರಂಭವಾಗಿ ೨೩ ಕಳೆದು, ೨೪ನೇ ವರ್ಷಕ್ಕೆ ಕಾಲಿಡುತ್ತಿದ್ದು, ಅಂದಿನಿಂದ ಇಂದಿನವರಗೂ ಸರಕಾರಿ ಶಾಲೆಗಳನ್ನೇ ಆಯ್ಕೆ ಮಾಡಿಕೊಂಡು ಮಕ್ಕಳಿಗೆ ಸಮವಸ್ತ್ರ, ನೋಟ್ ಪುಸ್ತಕ. ಪೀಠೋಪಕರಣ ವಿತರಣೆ, ಶಾಲೆಗಳಿಗೆ ಬಣ್ಣಹಂಚುವ ಕಾರ್ಯ ನೆರವೇರಿಸಲಾಗುತ್ತಿದೆ ಎಂದರು.
ಶಿಕ್ಷಕಿ ಲತಾಪುಟ್ಟಸ್ವಾಮಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ೧೦ ನೇ ತರಗತಿ ಮಹತ್ವದ ತಿರುವಾಗಿದೆ. ಆಸಂದರ್ಭದಲ್ಲಿ ವಿದ್ಯಾರ್ಥಿಗಳು ಪರಿಶ್ರಮಪಟ್ಟಲ್ಲಿ ಮುಂದಿನ ಅವರ ಭವಿಷ್ಯ ಉಜ್ವಲವಾಗಲಿದೆ ಎಂದರು.
ಇದೇವೇಳೆ ಕನ್ನಡಗೀತಾಗಾಯನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಚೇತನಕಲಾವಾಹಿನಿ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಶೀಲಾ, ಸದಸ್ಯ ಮಲ್ಲಿಕಾರ್ಜುನ್ ಸ್ವಾಮಿ ರಾಮಸಮುದ್ರ ಮಂಜುನಾಥ್, ಮುಖ್ಯಶಿಕ್ಷಕ ಶಿವಕುಮಾರ್, ದೈಹಿಕಶಿಕ್ಷಣ ಶಿಕ್ಷಕ ತಗಡೂರಯ್ಯ, ಸಹಶಿಕ್ಷಕರಾದ ಪುಟ್ಟಸ್ವಾಮಿ ಮಲ್ಲಶೆಟ್ಟಿ, ಕೃಷ್ಣಸ್ವಾಮಿ, ಸುಮಿತ್ರ, ಪ್ರಭುಸ್ವಾಮಿ, ಬಂಗಾರಸ್ವಾಮಿ, ಅಸೀನಾಖಾನಂ, ಗ್ರಾಮಸ್ಥರು ಹಾಜರಿದ್ದರು.