ಚಾಮರಾಜನಗರ: ಚಾಮರಾಜನಗರ ಎಪಿಎಂಸಿ ಚುನಾವಣೆಯಲ್ಲಿ ವರ್ತಕರ ಕ್ಷೇತ್ರ (ಮಾರಾಟ ಸಹಕಾರಿ ಮತ್ತು ಕೃಷಿ ಸಂಸ್ಕರಣಾ ಸಂಘ)ಕ್ಕೆ ಏ.೧೭ ರಂದು ನಡೆಯಲಿರುವ ಚುನಾವಣೆಗೆ ವೆಂಕಟರಾವ್ ಅವರು ಸ್ಪರ್ಧಿಸಿದ್ದು, ತಮ್ಮ ಬೆಂಬಲಿಗರೊಂದಿಗೆ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್, ಚುನಾವಣಾಧಿಕಾರಿ ಚಿದಾನಂದ ಗುರುಸ್ವಾಮಿ ಅವರಿಗೆ ನಾಮಪತ್ರ ಸಲ್ಲಿಸಿದರು.
ಸಹ ಚುನಾವಣಾಧಿಕಾರಿಗಳಾದ ಪ್ರಕಾಶ್‌ಕುಮಾರ್, ದುಂಡು ಮಹಾದೇವು, ಎಸ್‌ಎಂಟಿ ಮಲ್ಲಿಕ್, ನಂಜುಂಡಸ್ವಾಮಿ, ಸೋಮು, ಕಾರ್ ಬಾಬಣ್ಣ, ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಕಾಳಪ್ಪ, ಸಹಾ ಕಾರ್ಯದರ್ಶಿ ಸ್ವಾಮಿ, ಸಾಹಿಬ್ ಅಲ್ತಾಪ್, ಫರ್ಮಾನ್, ಶ್ರೀನಿವಾಸ, ಕಪ್ಪರಾಜು, ಮುರುಗ ಸೇರಿದಂತೆ ಮತ್ತಿತರರು ಹಾಜರಿದ್ದರು.
