ಚಾಮರಾಜನಗರ: ಚಾಮರಾಜನಗರ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ನಿರ್ದೇಶಕ ಸ್ಥಾನಕ್ಕಾಗಿ ಸ್ಪರ್ಧಿಸಿರುವ ಬದನಗುಪ್ಪೆ ಕ್ಷೇತ್ರದ ಅಭ್ಯರ್ಥಿ ಎಂ.ಬಿ.ಗುರುಸ್ವಾಮಿ ಪರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ತಾಲೂಕಿನ ಹುಲ್ಲೇಪುರ, ಯಡಿಯೂರು, ಕರಡಿಮೋಳೆ, ಮಹಂತಾಳಪುರ ಸೇರಿದಂತೆ ನಾನಾಗ್ರಾಮಗಳಲ್ಲಿ ರೈತಮುಖಂಡರನ್ನು ಭೇಟಿ ಮಾಡಿ, ಮತಯಾಚನೆ ಕಾರ್ಯಕ್ರಮ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಮಾತನಾಡಿ, ಏ.೧೭ ರಂದು ನಡೆಯಲಿರುವ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ನಿರ್ದೇಶಕಸ್ಥಾನಕ್ಕೆ ಸ್ಪರ್ಧಿಸಿರುವ ಎಂ.ಬಿ.ಗುರುಸ್ವಾಮಿ ರೈತರಾಗಿದ್ದು, ರೈತರ ಕಷ್ಟಕಾರ್ಪಣ್ಯಗಳನ್ನು ಬಲ್ಲವರಾಗಿದ್ದಾರೆ, ನಿಮ್ಮಗಳ ಸೇವೆಮಾಡಲು ಅವರಿಗೆ ಒಂದು ಅವಕಾಶ ನೀಡಬೇಕು ಎಂದು ರೈತಮುಖಂಡರಲ್ಲಿ ಮನವಿ ಮಾಡಿದರು.
ಜಿಪಂ ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ ಮಾತನಾಡಿ, ಸರಕಾರ ಕೃಷಿಉತ್ಪನ್ನ ಮಾರುಕಟ್ಟೆಯ ಅಭಿವೃದ್ದಿಗೆ ಸಾಕಷ್ಟು ಯೋಜನೆ ಜಾರಿಮಾಡಿದೆ, ಅವುಗಳನ್ನು ರೈತರಿಗೆ ತಲುಪಿಸಲು ಎಪಿಎಂಸಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಎಂ.ಬಿ.ಗುರುಸ್ವಾಮಿ ಅವರನ್ನು ಗೆಲ್ಲಿಸಬೇಕು, ಈ ಭಾಗದ ಶಾಸಕರಾದ ಪುಟ್ಟರಂಗಶೆಟ್ಟಿ ಅವರ ಕೈಬಲಪಡಿಸಬೇಕು ಎಂದು ಮನವಿಮಾಡಿದರು.
ಮುಖಂಡರಾದ ಬಿ.ಪಿ.ನಾಗರಾಜಮೂರ್ತಿ, ಎಪಿಎಂಸಿ ಅಧ್ಯಕ್ಷ ಡಿ.ನಾಗೇಂದ್ರ, ಮುತ್ತಿಗೆದೊರೆ, ನಟರಾಜು ಮಂಜು, ಮಧು, ಮಹದೇವಯ್ಯ, ಮಹದೇವಸ್ವಾಮಿ ಕುಮಾರ್, ಬಸವರಾಜಿ ,ಬಸವಣ್ಣ, ಮಹೇಶ್ ರಹಮನ್ ಸೇರಿದಂತೆ ಇತರರು ಹಾಜರಿದ್ದರು.
