ಚಾಮರಾಜನಗರ: ಯೂತ್ ಫಾರ್ ಸೇವಾ ಸಂಸ್ಥೆ ಚಾಮರಾಜನಗರ ತಾಲೂಕಿನ17 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸೇವಾ ಭಾರತಿ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಚಿಗುರು ಜನಪದ ವೈಭವ 23 ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಹೆಚ್ಚು ಜಯಶೀಲರಾಗಿ ಸಮಗ್ರ ಪ್ರಶಸ್ತಿಯನ್ನು ಮತ್ತು ಪಾರಿತೋಷಕವನ್ನು ಉತ್ತುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡೆಯಿತು.

  ಮುಖ್ಯ ಅತಿಥಿಗಳಾಗಿ ಸೇವಾ ಸಂಸ್ಥೆಯ ಮುಖ್ಯಸ್ಥ ಪ್ರವೀಣ್ ಮಾತನಾಡಿ ಸಮಾಜ ಹಾಗೂ ದೇಶ ಸೇವೆಯ ಗುಣವನ್ನು ಹೆಚ್ಚಿಸಿಕೊಳ್ಳಬೇಕು. ಜೀವನದ ಸಮಯವನ್ನು ಸಮಾಜಕ್ಕೆ ಅರ್ಪಿಸುವ ಹಾಗೂ ನೀಡುವ ಗುಣ ಬಾಲ್ಯದಿಂದಲೂ ನೀಡುವಂತಹ ಮನಸ್ಥಿತಿ ನಿರ್ಮಾಣವಾದಾಗ ಸದೃಢ ರಾಷ್ಟ್ರವನ್ನು ಕಟ್ಟಬಹುದು.

ಭಾರತದ ಮೇಲೆ ದಂಡೆತ್ತಿ ಬಂದ ಗ್ರೀಕ್ ದೊರೆ ಅಲೆಕ್ಸಾಂಡರ್ ನನ್ನು ಭಾರತದ ಒಬ್ಬ  ಭಿಕ್ಷುಕ ತನ್ನ ಬುದ್ಧಿವಂತಿಕೆಯಿಂದ ಆತನನ್ನು ಮಣಿಸಿದ ಘಟನೆಯನ್ನು ವಿವರಿಸಿ, ಬುದ್ಧಿ ಶಕ್ತಿ ಹಾಗೂ ದೇಶಭಕ್ತಿ ಭಾರತೀಯರಿಗೆ ಹೆಚ್ಚಿದೆ. ಭಾರತೀಯರು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಬಾಲ್ಯದಿಂದಲೂ ಸ್ಪರ್ಧೆಗಳಲ್ಲಿ ಭಾಗವಹಿಸುವ ಮತ್ತು ಕುತೂಹಲದಿಂದ ಎಲ್ಲವನ್ನು ತಿಳಿಯಬೇಕು. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು  ಎಂದು ತಿಳಿಸಿದರು.

ಬಹುಮಾನವನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ಕೆ . ಎಂ. ಮಹದೇವಸ್ವಾಮಿ , ಉತ್ತಮ್ ಮೋಟಾರ್ಸ್ ಮಾಲೀಕರಾದ ಭೂಮಿಕಾ ನಾಗೇಂದ್ರ ರವರು  ವಿಜೇತರಿಗೆ ಹಾಗೂ ಎಲ್ಲಾ ಸ್ಪರ್ಧೆಗಳಿಗೂ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ಮಕ್ಕಳ ಪ್ರತಿಭೆಗೆ ಮುಕ್ತ ಅವಕಾಶವನ್ನು ನೀಡಿರುವ ಯೂತ್ ಫಾರ್ ಸೇವಾ ಸಂಸ್ಥೆ ಕಾರ್ಯ ಅಭಿನಂದನೆಯವಾದದ್ದು. ಯೂಥ್ ಫಾರ್ ಸೇವಾ ಸಂಸ್ಥೆಯ ಚಿಗುರು ಜನಪದ ವೈಭವ23 ಜಿಲ್ಲೆಯಲ್ಲಿ ಮೊಟ್ಟ ಮೊದಲು ನಡೆಯುತ್ತಿದೆ. ಹೆಚ್ಚು ಮಕ್ಕಳು ಪಾಲ್ಗೊಂಡಿರುವುದು ಬಹಳ ಸಂತೋಷವೆಂದು ತಿಳಿಸಿದರು.

ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಉತ್ತುವಳ್ಳಿ ಶಾಲೆಯ ಮಕ್ಕಳಿಗೆ ಸಮಗ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಯೂಥ್ ಫಾರ್ ಸೇವಾ ಸಂಸ್ಥೆಯ ಜಿಲ್ಲಾ ಸಂಚಾಲಕ ವಿಷ್ಣು ,ತೇಜು ನಾಯಕ್, ಬೆಂಗಳೂರಿನ ಹರೀಶ್ ಭಟ್, ರಾಘವೇಂದ್ರ , ವಿಜಯಲಕ್ಷ್ಮಿ, ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಇನ್ನರಕ್ಕೂ ಹೆಚ್ಚು ಯೂತ್ ಫಾರ್ ಸೇವಾ ಸಂಸ್ಥೆಯ ಯುವಕರು, 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ,ಶಿಕ್ಷಕರು ತೀರ್ಪುಗಾರರು ಪೋಷಕರು ಭಾಗವಹಿಸಿ ಇಡೀ ದಿನ ಸಂಭ್ರಮ ಪಟ್ಟರು.