ಸರಗೂರು: ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ, ದಿನ ಬಳಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ರೈತ ವಿರೋಧಿ ಕಾನೂನು ಹಿಂಪಡೆಯುವಂತೆ ಒತ್ತಾಯಿಸಿ ಶುಕ್ರವಾರ ಸರಗೂರು ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ವರುಣ್ ಮಹೇಶ್ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರ ಸಮ್ಮುಖದಲ್ಲಿ ಪಟ್ಟಣದಲ್ಲಿ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಸಂತೆಮಾಸ್ತಮ್ಮ ದೇವಸ್ಥಾನದಲ್ಲಿ ಜಮಾವಣೆಗೊಂಡ ಪ್ರತಿಭಟನಾನಿರತ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ರೈತ ವಿರೋಧಿ ಮಸೂದೆಯನ್ನು ಹಿಂಪಡೆಯಬೇಕು, ಕಾಮರ್ಿಕ ವಿರೋಧಿ ಬಿಜೆಪಿ ಸಕರ್ಾರಕ್ಕೆ ದಿಕ್ಕಾರ, ದೇಶ ಸಂವಿಧಾನ ವಿರೋಧಿ ಬಿಜೆಪಿ ಸಕರ್ಾರಕ್ಕೆ ದಿಕ್ಕಾರ ಸೇರಿದಂತೆ ನಾನಾ ಘೋಷಣೆಗಳನ್ನು ಕೂಗುವ ಮೂಲಕ ಕಾಮರ್ಿಕ ವಿರೋಧಿ ಕೇಂದ್ರ ಸಕರ್ಾರದ ವಿರುದ್ಧ ತಮ್ಮ ಆಕ್ರೋಶವ್ಯಕ್ತಪಡಿಸಿದರು.
ಸರಗೂರು ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ವರುಣ್ ಮಹೇಶ್ ಮಾತನಾಡಿ, ದೆಹಲಿಯಲ್ಲಿ ಚಳವಳಿ ನಿರತರಾಗಿರುವ ಲಕ್ಷಾಂತರ ರೈತರ ಪ್ರತಿನಿಧಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಖುದ್ಧಾಗಿ ಮಾತನಾಡಬೇಕು. ರೈತರ ವಿರುದ್ಧ ದಾಖಲಿಸಿರುವ ಪೈರಿನ ಕೊಳೆ ಸುಟ್ಟಿರುವ ಪ್ರಕರಣಗಳೂ ಸೇರಿದಂತೆ 12 ಸಾವಿರ ಮೊಕದ್ದಮೆಗಳನ್ನು ವಾಪಾಸ್ಸು ತೆಗೆದುಕೊಂಡಿರುವುದಾಗಿ ಘೋಷಿಸಬೇಕು. ಮನದ ಮಾತು ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಮೂರು ಕರಾಳ ಕಾಯ್ದೆಗಳು ಸರಿಯಾಗಿವೇ ಇದೆ ಎಂದು ಸುಳ್ಳು ಹೇಳಿದ್ದು, ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಚಳವಳಿ ನಿರತ ರೈತರು ಭಯೋತ್ಪಾದಕರು ಎಂದಿರುವ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲಾ ಖಟ್ಟರ್ ಅವರೂ ಸಾರ್ವಜನಿಕವಾಗಿ ಕ್ಷೇಮೆ ಕೊರಬೇಕು. ಕಾಯ್ದೆಗಳನ್ನು ಪರಿಷ್ಕರಿಸಲು ಬಯಸುವುದಾರೆ ನಾಲ್ಕನೇ ಕಾಯಿದೆಯನ್ನು ತರಬೇಕು. ಅದರಲ್ಲಿ ಬೆಂಬಲ ಬೆಲೆಯನ್ನು ಕಡ್ಡಾಯವಾಗಿ ಮಾಡಿ ಅದರ ಉಲ್ಲಂಘನೆಯನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಬೇಕು. ರೈತ ವಿರೋಧಿ ಕಾಯ್ದೆ ಹಿಂಪಡೆಯಬೇಕು. ಸಂಸತ್ ಅಧಿವೇಶನ ಕರೆದು ಚಚರ್ಿಸಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಸರಗೂರು, ಎಚ್.ಡಿ.ಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಾದಪ್ಪ, ಏಜಾಜ್ಪಾಷಾ ಮಾತನಾಡಿದರು. ಅಡುಗೆ ಅನಿಲ, ಪೆಟ್ರೋಲ್ ಡಿಸೇಲ್ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವುದರಿಂದ ಗ್ರಾಮೀಣ ಪ್ರದೇಶದ ಸಾಮಾನ್ಯ ಜನರಿಗೆ ತುಂಬಾ ಸಮಸ್ಯೆ ಉಂಟಾಗಿದೆ. ಇದರಿಂದ ಬಡವರು ತುಂಬಾ ಕಷ್ಟಕರ ಜೀವನ ಸಾಗಿಸುವಂತಾಗಲಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬೆಲೆ ಏರಿಕೆ ಇಷ್ಟೊಂದು ಆಗಿರಲಿಲ್ಲ. ಆದರೆ, ಬಿಜೆಪಿ ನೇತೃತ್ವದ ಸಕರ್ಾರ ಅಧಿಕಾರಕ್ಕೆ ಬಂದ ಮೇಲೆ ಬೆಲೆ ಏರಿಕೆಯ ಬಿಸಿ ತಂಟಿದೆ. ಹೀಗಾಗಿ ಬಿಜೆಪಿ ನೇತೃತ್ವದ ಕೇಂದ್ರ ಸಕರ್ಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಇದಕ್ಕೂ ಮುನ್ನಾ ಸಂತೆಮಾಸ್ತಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪಟ್ಟಣದ ಎರಡನೇ ರಸ್ತೆಯ ಮೂಲಕ ಸಾಗಿದ ಪ್ರತಿಭಟನಾಕಾರರು ಆರ್ಯ ಈಡಿಗರ ರಾಮಮಂದಿರ, ಬಸವೇಶ್ವರ ದೇವಸ್ಥಾನ, ಚಿಕ್ಕದೇವಮ್ಮನ ವೃತ್ತ, ಮಹಾವೀರ ವೃತ್ತ ಮೂಲಕ ಬಸ್ ನಿಲ್ದಾಣಕ್ಕೆ ಆಗಮಿಸಿ ಮಾನವ ಸರಪಳಿ ನಿಮರ್ಿಸಿಕೊಂಡು ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ನಂತರ ತಹಶೀಲ್ದಾರ್ ನರಗುಂದ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸರಗೂರು, ಎಚ್.ಡಿ.ಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಾದಪ್ಪ, ಏಜಾಜ್ಪಾಷಾ, ಪ್ರಧಾನ ಕಾರ್ಯದಶರ್ಿ ಚಲುವರಾಜು, ಚಾಮರಾಜು, ಕೇಂದ್ರ ಸೆನ್ಸಾರ್ ಮಂಡಳಿ ಮಾಜಿ ಸದಸ್ಯ ಎಸ್.ವಿ.ವೆಂಕಟೇಶ್, ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಕಂದೇಗಾಲ ಶಿವರಾಜು, ನಯಾಜ್ ಹೊಂಡ, ಜಿ.ಪಂ.ಮಾಜಿ ಸದಸ್ಯರಾದ ಚಿಕ್ಕವೀರನಾಯಕ, ನಂದಿನಿ ಚಂಧ್ರಶೇಖರ್, ಎಸ್.ಆರ್.ಜಯಮಂಗಳ, ಪುರದಕಟ್ಟೆ ಬಸವರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದರಾಜು, ಶಂಭುಲಿಂಗನಾಯಕ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಶ್ರೀನಿವಾಸ, ಎಸ್.ಎನ್.ನಾಗರಾಜು, ಎಸ್.ಎಂ.ನಾಗಯ್ಯ, ಜಿ.ವಿ.ಮಧುಸೂದನ್, ರಂಗನಾಥ್, ಶಿವಶಂಕರ್, ಮುಜೀಬ್, ಹಂಚೀಪುರ ನಾಗರಾಜು, ಜಿ.ವಿ.ಸೀತಾರಾಮ್, ಭೀಮರಾಜು, ಹರಿದಾಸ್, ವೈಕುಂಠಯ್ಯ, ಬಿ.ಸಿ.ಬಸಪ್ಪ, ಮುಳ್ಳೂರು ವಾಣಿ, ಮಂಜುನಾಥ್, ಬಿರ್ವಾಳ್ ಬಸವರಾಜು, ಅಂಕನಾಯಕ, ಶೇಷ, ಮಂಜುನಾಥ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.