ಸರಗೂರು: ತಾಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಫೆ.28ರಿಂದ ಮೂರು ದಿನಗಳು ಶಾಸಕ ಅನಿಲ್ ಚಿಕ್ಕಮಾದು ಅಧ್ಯಕ್ಷತೆಯಲ್ಲಿ ‘ಗ್ರಾಮ ಸ್ವರಾಜ್’ ವಿಶೇಷ ಅಭಿವೃದ್ಧಿ ಅಭಿಯಾನ ಶಿಬಿರ, ಗ್ರಾಮ ವಾಸ್ತವ್ಯದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿವರ್ಾಹಣಾಧಿಕಾರಿ ಟಿ.ಎಸ್.ಸಿದ್ದು ತಿಳಿಸಿದ್ದಾರೆ.

ತಾಲೂಕು ಆಡಳಿತ, ಗ್ರಾಮ ಪಂಚಾಯಿತಿ, ದಿ.ಚಿಕ್ಕಮಾದು ಸೇವಾ ಪ್ರತಿಷ್ಠಾನ, ಸ್ವಾಮಿ ವಿವೇಕಾನಂದ ಯೂತ್ಮೂವ್ಮೆಂಟ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷೆ ಪರಿಮಳ ಶ್ಯಾಮ್, ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಜಿ.ಪಂ.ಸದಸ್ಯ ವೆಂಕಟಸ್ವಾಮಿ, ತಾ.ಪಂ.ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷೆ ತಾಯಮ್ಮ, ಗ್ರಾ.ಪಂ.ಅಧ್ಯಕ್ಷೆ ರೂಪಬಾಯಿ ಮಲ್ಲೇಶ್ನಾಯಕ್, ಉಪಾಧ್ಯಕ್ಷ ದೇವದಾಸ್, ಗ್ರಾ.ಪಂ.ಸದಸ್ಯರು ಭಾಗಿಯಾಗಲಿದ್ದಾರೆ ಎಂದು ಅವರು ಹೇಳಿದರು.

ಶಾಸಕ ಅನಿಲ್ ಚಿಕ್ಕಮಾದು ಅವರು ವಿಶೇಷವಾಗಿ ರೂಪಿಸಿದ ಕಾರ್ಯಕ್ರಮವಾಗಿದ್ದು, ತಾಲೂಕಿನ ವಿವಿಧ ಇಲಾಖಾಧಿಕಾರಿಗಳು ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಚಿಂತನೆಗಳೊಂದಿಗೆ ವಾಸ್ತವ್ಯ ಹೂಡಲಿದ್ದಾರೆ. ಸ್ವಚ್ಛತಾ ಕಾರ್ಯಕ್ರಮ, ಮನೆಮನೆಗಳ ಭೇಟಿ, ಸವಲತ್ತುಗಳ ವಿತರಣೆ, ವಿವಿಧ ಇಲಾಖೆಗಳ ಯೋಜನೆಗಳ ತಿಳಿವಳಿಕೆ ನೀಡುವ ಕಾರ್ಯಕ್ರಮ, ಕರ ಸಂಗ್ರಹಣೆ ಅಭಿಯಾನ, ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ವಿಶೇಷ ಗ್ರಾಮ ಸಭೆಯೊಂದಿಗೆ ಸ್ಥಳೀಯ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವ, ಸವಲತ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮವಾಗಿದೆ ಎಂದರು.

ಫೆ.28ರಂದು ಬೆಳಗ್ಗೆ 10.30ಕ್ಕೆ ಕಲ್ಲಹಳ್ಳದ ಶನೇಶ್ಚರ ಸ್ವಾಮಿದೇವಸ್ಥಾನದಲ್ಲಿ ಪೂಜೆ ಗ್ರಾಮ ಪರ್ಯಟನೆ ಮತ್ತು ಸಭೆ ನಡೆಸುವ ಮೂಲಕ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಲಿದ್ದು, 11.30ಕ್ಕೆ ವರದಯ್ಯನ ಕಾಲೋನಿ ಸಂಪರ್ಕ ರಸ್ತೆ ಗುದ್ದಲಿ ಪೂಜೆ, ಮಧ್ಯಾಹ್ನ 12.30ಕ್ಕೆ ಬಾಡಗದಲ್ಲಿ ಕುಂದು ಕೊರತೆ ಸಭೆ, 1.30ಕ್ಕೆ ಗದ್ದೆಹುಂಡಿ ಜೆಜೆಎಂ ಗುದ್ದಲಿ ಪೂಜೆ,2ಕ್ಕೆ ಬಿ.ಮಟಕೆರೆ ಗಿರಿಜನಹಾಡಿ ರಸ್ತೆ ಗುದ್ದಲಿ ಪೂಜೆ, 2.30ಕ್ಕೆ ವಲ್ಲಹಳ್ಳ ಗ್ರಾಮ ಭೇಟಿ ಅಹವಾಲು ಸ್ವೀಕಾರ, 3.30ಕ್ಕೆ ನೆಮ್ಮನಹಳ್ಳಿ ರಸ್ತೆ ಗುದ್ದಲಿ ಪೂಜೆ, ಸಂಜೆ 4.30ಕ್ಕೆ ಭಾವಿಕೆರೆಗಿರಿಜನಹಾಡಿ ಗ್ರಾಮ ಭೇಟಿ ಅಹವಾಲು ಸ್ವೀಕಾರ, 5ಕ್ಕೆ ಬಂಕವಾಡಿ ಗ್ರಾಮ ಪರ್ಯಟನೆ, 5.45ಕ್ಕೆ ಹಳೆ ಪಡಗು ಮತ್ತು ಹೊಸಪಡಗು ಲಂಬಾಣಿ ಕಾಲೋನಿ ಜೆಎಜೆಎಂ ಗುದ್ದಲಿ ಪೂಜೆ, 6.30ಕ್ಕೆ ನಡಾಡಿ ಸಂಪರ್ಕ ರಸ್ತೆ ಗುದ್ದಲಿ ಪೂಜೆ ನಂತರ 7.30ಕ್ಕೆ ಬಿ.ಮಟಕೆರೆ ಗಿರಿಜನ ಆಶ್ರಮ ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಮಾ.1ರಂದು ಬೆಳಗ್ಗೆ 8.30ಕ್ಕೆ ಬಿ.ಮಟಕೆರೆಯಲ್ಲಿ ರಸ್ತೆ ಸೂಚಕ ಫಲಕಗಳ ಅನಾವರಣ, ಗ್ರಾಮ ಸ್ವಚ್ಛತೆ, 10ಕ್ಕೆ ಮೊಳೆಯೂರು ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕ ರಸ್ತೆ, ಗ್ರಾಮ ಪರಿಮಿತಿ ಗುದ್ದಲಿ ಪೂಜೆ, 11ಕ್ಕೆ ಕಾಂತನಹಾಡಿ ಗ್ರಾಮ ಭೇಟಿ ಅಹವಾಲು ಸ್ವೀಕಾರ, ಮಧ್ಯಾಹ್ನ 12ಕ್ಕೆ ಕೆಬ್ಬೆಪುರ ಹಾಡಿ ಗ್ರಾಮ ಭೇಟಿ ಅಹವಾಲು ಸ್ವೀಕಾರ, 2ಕ್ಕೆ ಹಿರೇಹಳ್ಳಿಯಲ್ಲಿ ಗ್ರಾಮ ಸಂಪರ್ಕ ರಸ್ತೆ ಗುದ್ದಲಿ ಪೂಜೆ, 3ಕ್ಕೆ ಸೀಗೇವಾಡಿ ಹಾಡಿ ಭೇಟಿ ಅಹವಾಲು ಸ್ವೀಕಾರ, 3.45ಕ್ಕೆ ಹೊಸಕೋಟೆ ಕುಂದು ಕೊರತೆ ಸಭೆ, ಸಂಜೆ 4.45ಕ್ಕೆ ಕಂದಲಿಕೆಯಲ್ಲಿ ಕುಂದು ಕೊರತೆ ಸಭೆ, 5.30ಕ್ಕೆ ಕಂದಲಿಕೆತಿಟ್ಟು ಕುಂದು ಕೊರತೆ ಸಭೆ ಇರಲಿದೆ.

ಮಾ.2ರಂದು ಬೆಳಗ್ಗೆ 10ಕ್ಕೆ ಆಲನಹಳ್ಳಿ ಗ್ರಾಮ ಭೇಟಿ ಅಹವಾಲು ಸ್ವೀಕಾರ, 11ಕ್ಕೆ ಕುಣರ್ೇಗಾಲ ಗ್ರಾಮ ಭೇಟಿ, ಅಹವಾಲು ಸ್ವೀಕಾರ, ಮಧ್ಯಾಹ್ನ 12ಕ್ಕೆ ಕೂಡಗಿಹಾಡಿ ಗ್ರಾಮ ಭೇಟಿ, 12.30ಕ್ಕೆ ಕೂಡಗಿ ಗ್ರಾಮ ಭೇಟಿ, 1.30ಕ್ಕೆ ಕಾಡಬೇಗೂರಿನಲ್ಲಿ ಅಹವಾಲು ಸ್ವೀಕಾರ, ಸಂಜೆ 4ಕ್ಕೆ ಬಿ.ಮಟಕೆರೆ ಪಿಯು ಕಾಲೇಜು, ಪ್ರೌಢಶಾಲೆ ಕಟ್ಟಡ ಉದ್ಘಾಟಿಸಲಿದ್ದು, ನಂತರ ಸಮಾರೋಪ ಸಮಾರಂಭ ಇರಲಿದೆ ಎಂದು ಬಿ.ಮಟಕೆರೆ ಗ್ರಾಮ ಪಂಚಾಯಿತಿ ಪಿಡಿಒ ನಾಗರಾಜ್ ವಿವರಿಸಿದ್ದಾರೆ.

 

By admin