ಸರಗೂರು: ಪ್ರತಿಯೊಬ್ಬ ನಾಗರೀಕರ ಸಾಮಾನ್ಯ ಕಾಯಿಲೆಗಳಿಗೂ ಪಾರಂಪರಿಕ ಮನೆಮದ್ದಿನ ಮಾಹಿತಿಯನ್ನು ಒಳಗೊಂಡಿರುವ ಜಾಲಾತಾಣವಾದ ಸ್ಥಳೀಯ ಆರೋಗ್ಯ ಪರಂಪರೆಗಳು ಮತ್ತು ಔಷಧಿ ಸಸ್ಯಗಳ ಬಳಕೆಯ ಅಧ್ಯಯನ ಯೋಜನೆಯ ಅಂತಜರ್ಾಲವನ್ನು ರಾಜ್ಯ ಸಕರ್ಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದಶರ್ಿ ಜಾವಿದ್ ಅಖ್ತರ್ ಅನಾವರಣಗೊಳಿಸಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಯಿಲೆಗಳು ಮನೆಮದ್ದಿನಿಂದ ಗುಣಮುಖವಾಗುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲೆಂದು ಈ ಯೋಜನೆಯನ್ನು ಕೈಗೆತ್ತಿಕೊಂಡು ಎಲ್ಲಾ ಜನರಿಗೂ ತಲುಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಯೋಜನೆ ಹೆಚ್.ಡಿ.ಕೋಟೆ, ಸರಗೂರು ತಾಲೂಕಿಗೆ ಮಾತ್ರ ಸೀಮಿತವಾಗಿರದೆ ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಸಿಗುವಂತೆ ಅನುಕೂಲವಾಗಲೆಂದು ಅಂತಜರ್ಾಲದಲ್ಲಿ ಪರಿಚಯಿಸಲಾಗಿದೆ. ಇದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು. ಅನಾರೋಗ್ಯಕ್ಕೆ ಸಿಲುಕಿದರೆ ಶೀಘ್ರದಲ್ಲೇ ಮನೆಯಲ್ಲೇ ಸಿಗುವ ಆಹಾರ ಪದಾರ್ಥಗಳಿಂದ ರೋಗವನ್ನು ವಾಸಿ ಮಾಡಬಹುದಾಗಿದೆ ಎಂದು ಅವರು ಹೇಳಿದರು.

ಆಯುವರ್ೇದ ತಜ್ಞ ಡಾ.ಮೋಹನ್ ಕುಮಾರ್ ಬಿ ಥಂಬದ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಈ ಯೋಜನೆಯಲ್ಲಿ ತಾಲೂಕಿನ ಆಯ್ದ 30 ಹಳ್ಳಿಗಳ 650 ಮನೆಗಳಲ್ಲಿ ಪ್ರಾರಂಭಿಕ ಸಮೀಕ್ಷೆಯನ್ನು ಮಾಡಲಾಗಿದ್ದು, ಸಮೀಕ್ಷೆಯಲ್ಲಿ ಬಂದಿರುವ 30 ಸಾಮಾನ್ಯ ಪ್ರಾಥಮಿಕ ಹಂತದ ಕಾಯಿಲೆಗಳಿಗೆ 93 ಔಷಧಿಗಳನ್ನು ಮೌಲ್ಯೀಕರಿಸಿ ಹೆಚ್ಚಿನ ಜನಗಳಿಗೆ ತಲುಪಲು ಆರೋಗ್ಯ ಕಾರ್ಯಕರ್ತರು, ಆಶಾ, ಅಂಗನವಾಡಿ ಕಾರ್ಯಕರ್ತರು ಶಾಲೆಗಳು, ಸ್ವಸಹಾಯ ಗುಂಪುಗಳಿಗೆ ತರಬೇತಿಯನ್ನು ನೀಡಲಾಗಿದೆ. http://hdkotetalukaphc.org ಎಲ್ಲಾ ಮಾಹಿತಿ ಜಾಲಾತಾಣದಲ್ಲಿ ಸಿಗುತ್ತದೆ ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥೆಯ ಮಖ್ಯ ಕಾರ್ಯನಿವರ್ಾಹಣಾಧಿಕಾರಿ ಡಾ.ಜಿ.ಎಸ್.ಕುಮರ್ ಕೋವಿಡ್ ಸಂದರ್ಭದಲ್ಲಿ ಜನಸಾಮಾನ್ಯರ ಬಳಕೆಗೆ ಸಕರ್ಾರದ ವೆಲ್ನೆಸ್ ಕೇಂದ್ರಗಳ ಒಂದು ಭಾಗವಾಗಿ ಸಮಗ್ರ ಸೇವೆ ಸಿಗುವಂತಾಗಬೇಕು ಎಂದು ಹೇಳಿದರು.
ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ದಂಡಾಧಿಕಾರಿ ನರಗುಂದ ಮಾತನಾಡಿದರು.

ಬೆಂಗಳೂರಿನ ಟ್ರಾನ್ಸ್ ಡಿಸಿಪ್ಲಿನರಿ ವಿಶ್ವವಿದ್ಯಾನಿಲಯದ ಉಪಕುಲಪತಿ ದರ್ಶನ್ ಶಂಕರ್, ಅಬ್ದುಲ್ ಕರೀಂ, ಎ.ಕೆ.ಗುಪ್ತ, ಸಂಗೀತ ಹಾಗೂ ವಿವೇಕಾನಂದ ಸ್ಮಾರಕ ಅಸ್ಪತ್ರೆ ಉಪ ನಿದರ್ೇಶಕ ಡಾ.ರವೀಶ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಬಂಗಾರಶೆಟ್ಟಿ, ರಮೇಶ್, ಜ್ಯೋತೇಶ್, ಮಾನಸ, ಗೋಪಾಲ್ಕೃಷ್ಣ, ವಿದ್ಯಾ, ನಿಂಗರಾಜು ಸೇರಿದಂತೆ ಸಿಬ್ಬಂದಿವರ್ಗ ಹಾಜರಿದ್ದರು.

By admin