ಚಾಮರಾಜನಗರ: ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರೀಮತಿ ಪದ್ಮಾಕ್ಷಿ ಶ್ರೀ ಶಾಂತಪ್ಪ ದತ್ತಿ, ಶ್ರೀ ರಾಮಕೃಷ್ಣ ಜೆಟ್ಟಿ ದತ್ತಿ ಕಾರ್ಯಕ್ರಮದ ಅಂಗವಾಗಿ ಕವಿಗೋಷ್ಠಿ ಯನ್ನು ಕನ್ನಡ ಸಾಹಿತ್ಯ ಪರಿಷತ್ ಸಂಸ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಕವಿಗಳು ತಮ್ಮ ಸಾಹಿತ್ಯ ರಚನೆಯ ಸಂದರ್ಭದಲ್ಲಿ ಜನರಿಗೆ ಹತ್ತಿರವಾಗಿರುವ ಕವನ ರಚನೆ ಮಾಡಬೇಕು. ಆಧ್ಯಾತ್ಮ,ಸಾಮಾಜಿಕ ವೈಜ್ಞಾನಿಕ, ಪ್ರಚಲಿತ ವಿಚಾರದ ಹಾಗೂ ಪ್ರಕೃತಿಯ ವಿಷಯಗಳ ಸಮಗ್ರ ಅರಿವಿರಬೇಕು. ಸ್ವ ಅಧ್ಯಯನದ ಹವ್ಯಾಸ ಬೆಳಸಿ ಕೊಳ್ಳಬೇಕು. ಜನರಿಗೆ ತಲಪುವ ಸಾಹಿತ್ಯ ಮಾತ್ರ ಉಳಿಯಲಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶೈಲಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಕವಿಗೋಷ್ಠಿಯನ್ನು ಆಚರಿಸುವ ಮೂಲಕ ೧೫ ಕವಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ಕವಿಯ ಕವನಗಳು ಸಮಾಜದ ಮೌಲ್ಯವನ್ನು ತಿದ್ದುವ ಭಾವನೆಗಳ ಅಂತರಂಗವನ್ನು ಸಾಹಿತ್ಯದ ಮೂಲಕ ತಿಳಿಸುವ ಶಕ್ತಿಯಾಗಿದೆ. ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸರಿ ಮಾರ್ಗಕ್ಕೆ ತರುವ ಕಾರ್ಯವನ್ನು ಕವಿಗಳು ತಾವು ಅನುಸರಿಸುವ ಮೂಲಕ ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಇದೆ ಎಂದರು.
ಸಾಹಿತಿ ಸೋಮಶೇಖರ್ ಬಿಸಲವಾಡಿ, ಕ ಸಾ ಪ ಮಹಾಲಿಂಗ ಗಿರಗಿ, ನಾಗಲಕ್ಷ್ಮಿ ,ನಂಜುಂಡಸ್ವಾಮಿ, ದತ್ತಿ ದಾನಿ ಪದ್ಮಾಕ್ಷಿ,
ರವಿಕುಮಾರ ಇದ್ದರು.

,ಕವಿಗೋಷ್ಠಿಯಲ್ಲಿ ಕವಿಗಳಾದ ದುಂಡುಮಾದಯ್ಯ, ಡಾ. ಕೃಷ್ಣಕುಮಾರ್, ಗುರುಲಿಂಗಮ್ಮ, ಅಶ್ವಿನಿ, ಪದ್ಮಾಕ್ಷಿ, ವೆಂಕಟೇಶ್ ಬಾಬು, ಕಮರವಾಡಿ ಮಹದೇವಸ್ವಾಮಿ, ಕಿರಣ್ ಗಿರ್ಗಿ,ಮಂಗಳ ವೇಣುಗೋಪಾಲ್,ಮಹೇಶ್ , ಅನಿಲ್ ಮಹದೇವ್ ತಮ್ಮ ಕವನ ವಾಚಿಸಿದರು.